Since 30-11-2009

                                                

      ಕರ್ನಾಟಕದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಸದ್ದಿಲ್ಲದೆ ತನ್ನದೇ ಆದ ಇತಿಹಾಸವನ್ನು ಮೆಲುಕು ಹಾಕುತ್ತಾ, ಆಧುನಿಕ ಸೌಲಭ್ಯಗಳನ್ನು ಮೈಗೂಡಿಸಿಕೊಂಡು ಪ್ರಗತಿಯತ್ತ ಸಾಗುತ್ತಿರುವ  ಐತಿಹಾಸಿಕ ಗ್ರಾಮ ವಿಟ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿಗೆ ಸೇರಿದ ವಿಟ್ಲ ಗ್ರಾಮವು 2008ರ ಚುನಾವಣೆಯವರೆಗೆ ವಿಧಾನಸಭಾ ಕ್ಷೇತ್ರವಾಗಿತ್ತು.  ಕ್ಷೇತ್ರ ವಿಂಗಡಣೆ ಯಾದಾಗ ಈ ಕ್ಷೇತ್ರವು ಪುತ್ತೂರು, ಬಂಟ್ವಾಳ, ಮಂಗಳೂರು ವಿಧಾನಸಭಾ ಕ್ಷೇತ್ರ ಗಳಲ್ಲಿ ವಿಲೀನವಾಯಿತು. ಭೌಗೋಳಿಕ ಮತ್ತು ಸಾಮಾಜಿಕವಾಗಿ ನೋಡಿದಾಗ ವಿಟ್ಲ ಗ್ರಾಮವು ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ವಿಟ್ಲವು ನಾಲ್ಕು ಮಾರ್ಗಗಳ ಸಂಗಮ ಕೇಂದ್ರವಾಗಿದ್ದು, ಇವು  ಮಂಗಳೂರು, ಪುತ್ತೂರು, ಕಾಸರಗೋಡು ಮತ್ತು ಸಾಲೆತ್ತೂರು ಪ್ರದೇಶಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸುತ್ತವೆ.

  

 

 

            ವಿಟ್ಲದಲ್ಲಿ ಬಹುತೇಕ ಹಿಂದು, ಮುಸ್ಲಿಂ, ಕ್ರೈಸ್ತ ಸಮದಾಯದವರಿದ್ದು ತುಲು, ಕನ್ನಡ, ಮಲಯಾಳಂ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳನ್ನು ವ್ಯಾವಹಾರಿಕವಾಗಿ ಬಳಸುತ್ತಾರೆ. ಇಲ್ಲಿನ ಜನರು ಧಾರ್ಮಿಕ ಶ್ರಧ್ಧೆಯುಳ್ಳವರಾಗಿದ್ದು, ಸ್ನೇಹಪರ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಅನೇಕ ಆರಾಧನಾಲಯಗಳಿದ್ದು ಇವುಗಳಲ್ಲಿ  ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಕೇಂದ್ರ ಜುಮಾ ಮಸೀದಿ ಮತ್ತು  ಶೋಕ ಮಾತೆಯ ಇಗರ್ಜಿ ಪ್ರಮುಖವಾಗಿವೆ.

            ಕಲಂಜಿಮಲೆ ಎಂಬ ದಟ್ಟ ಅರಣ್ಯವು ವಿಟ್ಲವನ್ನು ಸುತ್ತುವರಿದಿದ್ದು, ಇಲ್ಲಿ ಬಕಾಸುರನೆಂಬ ರಾಕ್ಷಸನು ಗುಹೆಯಲ್ಲಿ ವಾಸವಾಗಿದ್ದನೆಂಬ ಪ್ರತೀತಿ ಇದೆ. ಇದಕ್ಕೆ ಪೂರಕವೆಂಬಂತೆ ನೆತ್ತರೆಕೆರೆ ಎಂಬ ಪ್ರದೇಶವಿದ್ದು, ಭೀಮನು ಬಕಾಸುರನನ್ನು ವದಿಸಿದಾಗ, ಅವನ ನೆತ್ತರು ಹರಿದ ಸ್ಥಳ ಎಂಬ ಐತಿಹಾಸಿಕ ಕಾರಣ ನೀಡಲಾಗುತ್ತದೆ.

ಶೈಕ್ಷಣಿಕವಾಗಿ ವಿಟ್ಲವು ಸುದೃಡವಾಗಿದ್ದು, ಅನೇಕ ವಿದ್ಯಾಕೇಂದ್ರಗಳನ್ನು ಹೊಂದಿದೆ.

  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿಟ್ಲ
  • ಸಂತರೀಟ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ವಿಟ್ಲ
  • ಸಂತರೀಟ ಆಂಗ್ಲ ಮಾಧ್ಯಮ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ, ವಿಟ್ಲ
  • ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ, ವಿಟ್ಲ
  • ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ
  • ವಿಠಲ ಬಾಲಿಕಾ ಪ್ರೌಢ ಶಾಲೆ, ವಿಟ್ಲ
  • ಸರಕಾರಿ ಆರ್ಟ್ಸ್ ಮತ್ತು ಕಾಮರ್ಸ್ ಪದವಿ ಕಾಲೇಜು, ವಿಟ್ಲ

 

*** 

Spot news

ನಮ್ಮ ವಿಟ್ಲ - LIVE TV

ಗೂಗುಲ್ ಕಣ್ಣಿನಲ್ಲಿ ನೋಡಿದಾಗ ನಮ್ಮ ವಿಟ್ಲ...

 

-----------------------------------------------------------------------------------------------------------------------------------------------------------------------------------------------------

ಇಣುಕಿದವರು...

                                                                           

                                                                        Site Owner: ಇಸ್ಮಾಯಿಲ್ ಬಶೀರ್ ಸೆರಂತಿಮಠ, ವಿಟ್ಲ

Moderator: ಅಬೂಬಕ್ಕರ್ ವಿ. ಜೋಗಿಮಠ, ವಿಟ್ಲ  

ವೀಡಿಯೊಗಳು

4 views - 0 comments
6 views - 0 comments
5 views - 0 comments
9 views - 0 comments